ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!
ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.
ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು. ಅಲ್ಲ, ಝಾಡಿಸಲಿ ಬಿಡಿ - ಮುಳ್ಳನ್ನು ಮುಳ್ಳಿಂದಲೇ ತೆಗೀಬೇಕು, eye for an eye, ಧರ್ಮಾಂಧತೆಗೆ ಧರ್ಮಾಂಧತೆಯೇ ಮದ್ದು ಅನ್ನೋರಲ್ವ ಇವರು. ಇವರು ಅವರನ್ನ, ಅವರು ಇವರನ್ನ ಝಾಡಿಸಿದರೆ ನಮಗೊಳ್ಳೇದೆ - ಯಾಕಂದರೆ, ಎಲ್ಲಾ ಧರ್ಮದ ದೋಸೇನೂ ತೂತು ಅಂತ ಗೊತ್ತಾಗತ್ತೆ!
ಆ ಲೇಖನದ ಗಲಾಟೆಯಲ್ಲಿ ಯಾರೋ ಕೆಲವರು "ಅಂಕಿ ಅಂಶಗಳ ಸಮೇತ ಅವರ ಮಾತನ್ನು ಅಲ್ಲಗಳೆಯಲಿ" ಎಂದು ಸವಾಲೆಸೆದರು. ನನಗೋ ಹಂಗೆಲ್ಲಾ ಎದೆತಟ್ಟಿಕೊಂಡು ಯಾರಾದರೂ ಮಾತಾಡಿಬಿಟ್ಟರೆ ಅಂಜಿಕೆಯಾಗತ್ತೆ. ಸುಳ್ಳು ಹೇಳೋರು ಎದೆ ತಟ್ಟಿಕೊಂಡು ಹೇಳ್ತಾರ ಅಂತ. ಆದರೂ ಯಾರೂ ಇಲ್ಲದಾಗ ಏನಿರಬಹುದು ಅಂತಹ "ಮಹಾನ್ ಸತ್ಯ" ಅಂತ ಕುತೂಹಲ ಶುರು ಆಯ್ತು. ನೋಡಿದರೆ ಭೈರಪ್ಪನವರು ತಮ್ಮ ಯಥಾ ಬಗೆಯಲ್ಲಿ ಉಸಿರು ಬಿಗಿಹಿಡಿದು ಬರೆದ, ಕಾಮ, ಕೋಲನ್, ಸೆಮಿಕೊಲನ್ ಇಲ್ಲದ ಉದ್ದುದ್ದ ಪ್ಯಾರಾಗ್ರಾಫ್ ನೋಡೀನೇ ಸುಸ್ತಾಯ್ತು.
ಆಮೇಲೆ ಹತ್ತಾರು %ಗಳು ಒಂದೇ ಪ್ಯಾರಾದಲ್ಲಿ ಕಿಕ್ಕಿರಿದಿದ್ವು. ಇಲ್ಲಿ ಬಹುಪಾಲು ಸತ್ಯ ಇರಲೇಬೇಕು ಅಂತ ಹತ್ತಿರ ಹೋಗಿ ನೋಡಿದೆ. ಏನೋ ಏರುಪೇರು ಇದೆಯಲ್ಲಾ ಅನ್ನಿಸ್ತು. ನೋಡೋಕೆ ಶುರುಮಾಡಿದೆ. ಸಹಾಯಕ್ಕೆ ವಿಕೀಪಿಡಿಯಾ ["ಬಡವರ ಎನ್ಸೈಕ್ಲೋಪೀಡಿಯ"], ಅಲ್ಲದೆ world factbook ಕೂಡ ಆನ್‌ಲೈನ್ ಇದೆ.
ಸರಿ, ಅವುಗಳನ್ನಿಟ್ಟುಕೊಂಡು ಭೈರಪ್ಪನವರ "ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆ ಪಟ್ಟಿ" ನೋಡಿದರೆ, ಬರೀ ತಪ್ಪು ತಪ್ಪು ಅಂಕಿ-ಅಂಶ! ಹುಡುಕ್ತಾ ಕಂಡಿದ್ದನ್ನ ಇಲ್ಲಿ ಕಾಪಿ-ಪೇಸ್ಟ್ ಮಾಡಿದೀನಿ. ಜತೆ ಜತೆಗೆ, ಭೈರಪ್ಪಂಗೆ ಬೇಡವಾದ, ಹಾಗಾಗಿ ಅವರು ಹೇಳದ ಕೆಲವು ಇಂಟರೆಸ್ಟಿಂಗ್ ಸಂಗತಿಗಳೂ ಸಿಕ್ಕವು! ಅಷ್ಟಕ್ಕಾದರೂ ಭೈರಪ್ಪಂಗೆ ಥ್ಯಾಂಕ್ಸ್ ಹೇಳಲೇಬೇಕು.
ಅಂಗೋಲಾ : ಭೈರಪ್ಪ ಹೇಳೋ ೯೦ ಅಲ್ಲ ಬರೇ ೫೩! [indigenous beliefs 47%, Roman Catholic 38%, Protestant 15% (1998 est.)
ಬುರುಂಡಿ : ೭೮ ಅಲ್ಲ ೬೭ [ ಆದರೆ ಬುರುಂಡಿ ಮಕ್ಕಳ ಓದಿಗೆ ಇಂಡಿಯಾಕ್ಕಿಂತ ಹೆಚ್ಚು ಖರ್ಚು ಮಾಡತ್ತಂತೆ! 5.1%,GDP ಖರ್ಚು ಮಾಡಿದರೆ ಇಂಡಿಯ - 3.2% of GDP (2005) )
ಗಬನ್ - ೭೩ ಅಲ್ಲ ೫೫ ರಿಂದ ೭೫ ಇರಬಹುದಂತೆ! [including non-citizens practice at least some elements of Christianity. ಇಷ್ಟಾಗಿ ಈ ದೇಶಕ್ಕೆ ಅಧ್ಯಕ್ಷ ಒಬ್ಬ ಮುಸ್ಲಿಮ್] Christian 55%-75%, animist, Muslim less than 1%
ಚಾಡ್ - ೩೩ ಅಲ್ಲ ೩೪ [Muslim 53.1%, Catholic 20.1%, Protestant 14.2%, animist 7.3%, other 0.5%, unknown 1.7%, atheist 3.1% (1993 census) ]
ಕಾಂಗೋ (ಇದು ಯಾವ ಕಾಂಗೋ ಅಂತ ಕೂಡ ಬರದಿಲ್ಲ, ಎರಡಿದೆಯಲ್ಲ! ಬಹುಶಃ ರಿಪಬ್ಲಿಕ್ ಆಫ್ ಕಾಂಗೋ) - ೬೨ ಅಲ್ಲ ೫೦ : Christian 50%, animist 48%, Muslim 2%
ಕೆಮರೂನ್ : ೩೫ ಅಲ್ಲ ೪೦ [Muslim centres and Christian churches of various denominations operate freely throughout Cameroon.... The country is generally characterized by a high degree of religious tolerance. [ indigenous beliefs 40%, Christian 40%, Muslim 20% ]
ಈಸ್ಟ್-ಟಿಮೋರ್ : ೯೮[ಕರೆಕ್ಟ್!] Roman Catholic 98%, Muslim 1%, Protestant 1% (2005)
ಈಕ್ವಟೋರಿಯಲ್ ಗಿನಿ : ಯಾರಿಗೂ ಗೊತ್ತಿಲ್ಲ. ಭೈರಪ್ಪನ ಬಿಟ್ಟು : ೯೪ ಅಂತೆ! [nominally Christian and predominantly Roman Catholic, pagan practices]
ಇಥಿಯೋಪಿಯ : ೫೨ ಅಲ್ಲ ೬೦ [ Christian 60.8% (Orthodox 50.6%, Protestant 10.2%), Muslim 32.8%, traditional 4.6%, other 1.8% (1994 census) ]
ಟಾನ್ಸೇನಿಯಾ : ೨೦ ಅಲ್ಲ ೩೦ [ mainland - Christian 30%, Muslim 35%, indigenous beliefs 35%; Zanzibar - more than 99% Muslim ] Current statistics on religion in Tanzania are unavailable because religious surveys were eliminated from government census reports after 1967. Religious leaders and sociologists estimate that the Christian and Muslim communities are equal, each accounting for 30 to 40 percent of the population,
ಟೊಗೊ : ೨೩ ಅಲ್ಲ ೨೯ [ Christian 29%, Muslim 20%, indigenous beliefs 51% ]
ಉಗಾಂಡಾ : ೭೦ ಅಲ್ಲ ೮೪ [ Roman Catholic 41.9%, Protestant 42% (Anglican 35.9%, Pentecostal 4.6%, Seventh Day Adventist 1.5%), Muslim 12.1%, other 3.1%, none 0.9% (2002 census)]
ಲೈಬೀರಿಯಾ ೬೮ ಅಲ್ಲ ೪೦ [ Christian 40%, Muslim 20%, indigenous beliefs 40% ]
ಮೊಜಾಂಬಿಕ್ :೩೧ ಅಲ್ಲ ೪೧ [ Catholic 23.8%, Muslim 17.8%, Zionist Christian 17.5%, other 17.8%, none 23.1% (1997 census) ]
ಕೆನ್ಯಾ:೨೫ ಅಲ್ಲ ೭೮! [Protestant 45%, Roman Catholic 33%, Muslim 10%, indigenous beliefs 10%, other 2%
note: a large majority of Kenyans are Christian, but estimates for the percentage of the population that adheres to Islam or indigenous beliefs vary widely] Christianity was first brought to Kenya in the fifteenth century by the Portuguese and spread rapidly during the nineteenth century, when it experienced a revival. Today, the main Christian denominations in Kenya are Protestant confessions, which make up 38% of the country's religious composition.
ಮೊಜಾಂಬಿಕ್ : ೩೧ ಅಲ್ಲ ೪೬ [ half of the population does not profess to practice a religion or creed ... There are 732 religious denominations and 144 religious organizations registered with the Department of Religious Affairs of the Ministry of Justice.]
ನೈಜೀರಿಯಾ : ೫೨ ಅಲ್ಲ ೪೦ - [Muslim 50%, Christian 40%, indigenous beliefs 10% ] ನೈಜೀರಿಯಾದಲ್ಲಿ ಕ್ರಿಶ್ಚಿಯನ್ - ಮುಸ್ಲಿಮ್ ಹೊಡದಾಟದ ನಡುವೆ ಕ್ರಿಸ್ಲಾಂ ಅಂತ ಇದೆಯಂತೆ! [Chrislam is a blend of Christianity and Islam that takes practises from both the Bible and the Koran. It hopes to quell religious feuds among Nigerians.]
ಫಿಲಿಪೀನ್ಸ್ : ೮೪ ಅಲ್ಲ ೮೮ (ಅದರ್ ಕ್ರಿಶ್ಚಿಯನ್ನರಿಗೆ ಬೇಜಾರಾಗಬಾರದಲ್ಲ...) [Roman Catholic 80.9%, Muslim 5%, Evangelical 2.8%, Iglesia ni Kristo 2.3%, Aglipayan 2%, other Christian 4.5%, other 1.8%, unspecified 0.6%, none 0.1% (2000 census)]
ರುವಾಂಡಾ : ೬೯ ಅಲ್ಲ ೮೭ : [ Roman Catholic 56.5%, Protestant 26%, Adventist 11.1%, Muslim 4.6%, indigenous beliefs 0.1%, none 1.7% (2001) ]
ದಕ್ಷಿಣ ಆಫ್ರಿಕಾ ೭೮ ಅಲ್ಲ ೪೪ + ೩೬ = ೮೦ (ಇಲ್ಲಿ ಅದರ್ ಕ್ರಿಶ್ಚಿಯನ್ನರೂ ಸೇರಿಸಿಕೊಂಡಿದ್ದಾರೆ! ಆದರೂ ತಪ್ಪು!) [ Zion Christian 11.1%, Pentecostal/Charismatic 8.2%, Catholic 7.1%, Methodist 6.8%, Dutch Reformed 6.7%, Anglican 3.8%, Muslim 1.5%, other Christian 36%, other 2.3%, unspecified 1.4%, none 15.1% (2001 census)]
ಸುಡಾನ್ : ೩೦ ಅಲ್ಲ ೫ (ಇದ್ಯಾಕೋ ತುಂಬಾ ಎಡವಟ್ಟು!) [ Sunni Muslim 70% (in north), Christian 5% (mostly in south and Khartoum), indigenous beliefs 25% ] Christianity reached what is now northern Sudan by about the fourth century. During the 19th century, British missionaries introduced the faith into the South Sudan.
ಸೌತ್ ಕೊರಿಯ : ೪೯ ಅಲ್ಲ ೨೬ [Christian 26.3% (Protestant 19.7%, Roman Catholic 6.6%), Buddhist 23.2%, other or unknown 1.3%, none 49.3% (1995 census) ]
ಪಾಪುವ ನ್ಯೂ ಗಿನಿ : ೯೭ ಅಲ್ಲ ೯೯ ಆದರೆ ಕ್ರಿಶ್ಚಿಯನ್ನರೊಳಗೇ ಇರುವ ಹಲವು ಪ್ರಬೇಧಗಳನ್ನು ಕ್ಯಾರೆ ಅನ್ನದೆ ಒಟ್ಟಿಗೆ ಲೆಕ್ಕ ಹಾಕಬೇಕು. [Roman Catholic 27%, Evangelical Lutheran 19.5%, United Church 11.5%, Seventh-Day Adventist 10%, Pentecostal 8.6%, Evangelical Alliance 5.2%, Anglican 3.2%, Baptist 2.5%, other Protestant 8.9%, Bahai 0.3%, indigenous beliefs and other 3.3% (2000 census)]
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ : ೮೨ ಅಲ್ಲ ೫೦ [ indigenous beliefs 35%, Protestant 25%, Roman Catholic 25%, Muslim 15% note: animistic beliefs and practices strongly influence the Christian majority ]
ಜೈರೆ (zaire? ಇದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇರಬೇಕು!) ೯೦ ಅಲ್ಲ ೯೪ [Roman Catholic 50%, Protestant 20%, Kimbanguist 10%, Muslim 10%, other (includes syncretic sects and indigenous beliefs) 10% ] The number of persons who can be categorized as belonging exclusively to one group or another is limited. Overlapping affiliations are more common... In the search for spiritual resources, the Congolese have frequently displayed a marked openness and pragmatism... Protestant churches are valued, as are their Catholic counterparts, not only for the medical and educational services they provide, but also for serving as islands of integrity in a sea of corruption. ಆದರೆ ಜೈರೆ ಅಂತ ಒಂದು ದೇಶವೇ ಈಗಿಲ್ಲ! ಸುಮಾರು ಹನ್ನೊಂದು ವರ್ಷದ ಹಿಂದೆಯೇ ಅದಕ್ಕೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಂತ ನಾಮಕರಣವಾಗಿದೆ. ಇದು ಭೈರಪ್ಪನವರ ದಿವ್ಯಮತಿಗೆ ಗೊತ್ತಿಲ್ಲದೇ ಇದ್ದೀತೆ?
ಮೇಲಿನ ಅಂಕಿ ಅಂಶದ ತಪ್ಪುಗಳು ಅವರ ವಾದಕ್ಕೆ ತೊಂದರೆ ಏನೂ ಮಾಡಲ್ಲ, ಬಿಡಿ. ಕತ್ತೆಗೆ ಮೂರೇ ಕಾಲು ಅಂದುಕೊಂಡೇ ಅವರು ಸಾಧಿಸೋಕೆ ಹೊರಟಿರೋದನ್ನ ಸಾಧಿಸಿಬಿಡಬಹುದು! ಆದರೂ, ಅಲ್ರಿ, ಸತ್ಯದ ದೃಷ್ಟಾರ ಬರೆದಿರುವ ಅಂಕಿ-ಅಂಶ ಆಧಾರಿತ ಲೇಖನದಲ್ಲಿ ಸುಳ್ಳು, ತಪ್ಪು ಇರೋಕೆ ಸಾಧ್ಯನ? ಅವರ integrity ಬಗ್ಗೆ ಒಂದು ಚೂರಾದರೂ ಗೌರವ ವಿಶ್ವಾಸ ಇರಕೂಡದ? ಒಂದು ಪ್ಯಾರಾದಲ್ಲೇ ಇಷ್ಟೆಲ್ಲ ಸುಲಭದ ತಪ್ಪುಗಳು ಇರೋವಾಗ ಭೈರಪ್ಪ ತಮ್ಮ ಮಾತುಗಳನ್ನು ತೂಗಿ ಆಡ್ತಾರೆ ಅಂತೀರ? ತಮ್ಮ ವಿಷಯದ ಬಗ್ಗೆ ಕೊಂಚನಾದರೂ ಗಂಭೀರವಾದ ಕಾಳಜಿ, ಚಿಂತನೆ ಇದ್ದಿದ್ದರೆ, ಇಂತಹ ಕ್ಷುಲ್ಲಕ ತಪ್ಪುಗಳು ಯಾರಾದರೂ ಮಾಡ್ತಾರ? ಇದು ಕನ್ನಡದ ಜನಪ್ರಿಯ ಪೇಪರಿನಲ್ಲಿ ಬಂದಿರೋ ಕನ್ನಡದ ಜನಪ್ರಿಯ ಲೇಖಕರು ಬರೆದಿದ್ದು ಅಂತ ನಿಮ್ಮ ಮಕ್ಕಳಿಗೆ ಗೊತ್ತಾದರೆ, ಅವರು ಆಮೇಲೆ ಕನ್ನಡ ಓದೋದೆ ಬಿಟ್ಟುಬಿಟ್ಟಾರು. ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪ "ಓದುಗರನ್ನು ಉತ್ಪಾದನೆ ಮಾಡಿದವರು" ಅಂತ ಹೇಳಿಕೊಳ್ಳೋರಿಗೆ ಇದು ಕುಚೋದ್ಯ ಅನಿಸಬಹುದು. ನಿಜ, ಭೈರಪ್ಪ ಕವಾಯತು ಮಾಡಿಸಿದ ಸೈನ್ಯ ಬೆಂಗಾವಲಿಗೆ ಇರೋದು ಅವರ "ಉತ್ಪಾದನೆ"ಯ ಫಲಕ್ಕೆ ಸಾಕ್ಷಿ ಅಲ್ಲವೆ?
ಇನ್ನೂ ಬೇಕಾದಷ್ಟು "%ನ ಸತ್ಯಗಳು" ಅಲ್ಲಿವೆ. ಅದರ ಬಗ್ಗೆ ನೀವೇ ಒಂದು ಚೂರು ಟೈಮಿದ್ದರೆ ನೋಡಿ. ಆದರೂ ಇನ್ನೊಂದು ವಿಷಯ: "ಹಿಟ್ಲರ್ಸ್ ಪೋಪ್" ಪುಸ್ತಕದ ಬಗ್ಗೆ ಬೇರೆ ಕೂಗಿದಾರೆ. ಅದರ ಬಗೆಗಿನ ಅನುಮಾನಗಳು ಎಷ್ಟು ದಟ್ಟವಾಗಿದೆಯೆಂದರೆ, ಆ ಪುಸ್ತಕದ ಲೇಖಕನೇ ಹಿಂದೇಟು ಹಾಕಿದ್ದಾನೆ. ಆದರೆ, ಭೈರಪ್ಪನವರು ಅದನ್ನು ಹಿಡಿದು ಕಿರುಚುತಾನೇ ಇದ್ದಾರೆ! ಇನ್ನು ಕಾನ್ರಾಡ್ ಎಲ್ಸ್‌ಟ್ / ಗೋತಿಯೆ / ಎನ್.ಎಸ್.ರಾಜಾರಾಂ - ದ ಫ್ರಾಡ್ (ಈ ಸಲ ಫ್ರಾಲಿನ ಯಾಕೋ ಬಿಟ್ಟುಬಿಟ್ಟಿದ್ದಾರೆ) ಇವರ ಬಗ್ಗೆ ನೀವೇ ಓದಿಕೊಳ್ಳಿ. ಇವರೆಲ್ಲರ ಪರವಾಗಿ ಬೇಕಾದಷ್ಟು ಜನ ಸದ್ದು ಮಾಡ್ತಿದ್ದಾರೆ. ಆದರೆ ಸವಾಲೆಸದೋರು ಬೇಕಂತಂದರೆ ತುಸು ಹುಡುಕಬೇಕು.
ನಾನಿಷ್ಟು ನೋಡಿದ್ದೀನಿ. ನೀವಷ್ಟು ನೋಡಿಕೊಳ್ಳಿ.
ಅಂದ ಹಾಗೆ, ಭೈರಪ್ಪನವರ ಲೇಖನ ಮಕ್ಕಳ ಕೈಗೆ ಸಿಕ್ಕದ ಹಾಗೆ ನೋಡಿಕೊಳ್ಳಿ, ಗುಡ್ ಲಕ್!
Wikipedia: http://en.wikipedia.org/wiki/Christianity_in_Africa
World Fact Book: https://www.cia.gov/library/publications/the-world-factbook
No comments:
Post a Comment