ಏನಕ್ಕಾಗಿ

ನಲ್ಲ-
ಮುಂಜಾನೆ ಜಗಳವಾಡಿ ಹೋದ ನಿನ್ನ
ದಾರಿ ಕಾಯುವಾಗ ಸಂಜೆ
ಮೆಲ್ಲನೆ ಕತ್ತಲಿಳಿಯುತ್ತಾ
ಕಿಟಕಿಗಾಜಿನ ಮೇಲೆ ಮಳೆಯ ಹನಿ
ಆತುರಪಡದೆ ಸಾವಕಾಶ ಜಾರುತ್ತದೆ.



ನುಂಗಿಕೊಂಡದ್ದು

ನಗುತ್ತೀನೋ ನಲ್ಲ-
ಹೊಸತರಲ್ಲಿ ಚಳಿಗಾಲದ ಬಿಸಿಲಂತಿದ್ದವನು
ಇತ್ತಿತ್ತ
ರಣಬೇಸಿಗೆಯ ಬಿಸಿಲಾಗಿ
ಒಣಗಿಸುತ್ತಿದ್ದೀಯ
ಅಂತ ನಿನಗೇ ಗೊತ್ತಿಲ್ಲದೆ
ಉದಾರವಾದಿಯಂತಾಡಿದಾಗ.