17.8.08

ಸೆರಗ ಹಿಂದಿನ ಚಂದ್ರ

ಕೋಟಿ ಕೋಟಿ ಕಣ್ಣುಗಳ ಎದುರು ಪಕ್ಷಕ್ಕೊಮ್ಮೆ ಹಿಗ್ಗಿ ಕುಗ್ಗುವ ಚಂದ್ರನಿಗೆ ಇಂದು ಮಾತ್ರ
ತಾಯ ನೆರಳಿನ ಸೆರಗ ಹಿಂದೆ ಅವಿತುಕೊಳ್ಳುವ ನಾಚಿಕೆ

೦೫:೪೩ಕ್ಕೆ ನೆರಳಾವರಿಸಲು ತೊಡಗಿ ಏಳು ನಿಮಿಷವಾಗಿದೆ ಅಷ್ಟೆ

೦೬:೦೭ಕ್ಕೆ ನೆರಳು ಮುತ್ತಿಕ್ಕ ತೊಡಗಿ ೩೧ನಿಮಿಷ ಕಳೆದಾಗ

೦೬:೧೪ಕ್ಕೆ ಪೂರ್ವದ ದಿಗಂತದಲ್ಲಿ ಸೂರ್ಯನ ಹೊಂಗಿರಣ ಭೂನೆರಳಿನ ಹಿಂದೆ ನಾಚುತ್ತಿರುವ ಚಂದ್ರನನ್ನು ಹಿಂಬಾಲಿಸುವ ಆತುರತೆಯಲ್ಲಿ

೦೬:೨೩ಕ್ಕೆ ಮುಳುಗುವ ಚಂದದ ಚಂದ್ರನ ಕೊನೆ ಚಿತ್ರ. ಮರದ ತುದಿ ಕಡೆಗೂ ತಾನು ಮುತ್ತಿಟ್ಟುಬಿಟ್ಟೆ ಎನ್ನುತ್ತಿರುವಾಗ

ಮನೆಯ ಹತ್ತಿರದ ರೇಲ್ವೆ ಸ್ಟೇಷನ್ನಿನ ಕಾರ್ ಪಾರ್ಕಿನ ನಾಕನೆ ಮಹಡಿಯಿಂದ ತೆಗೆದ ಇಂತವೇ ಇನ್ನೂ ಹಲವಾರು ಚಿತ್ರಗಳಿಗೆ ಮತ್ತು ಮೇಲಿನವುಗಳ ದೊಡ್ಡ ಚಿತ್ರಗಳಿಗೆ ಇಲ್ಲಿ ಚಿಟುಕಿ

No comments: