17.7.08

ಅವನು ಇವನು ನೀಲುಗಳು

ಕೇಳಿದ್ದು ಹೇಳಿದ್ದು

"ಬಾಗಿಲು ತಟ್ಟಿದ ಸದ್ದಾಯಿತು" ಅಂದ ಅವನು.
"ಸದ್ದು ಬಾಗಿಲ ತಟ್ಟಿತು" ಅಂದ ಇವನು.
ಅವನು ಅರ್ಥವಾಗದೆ ಹುಬ್ಬುಗಂಟಿಕ್ಕಿ ದುರುಗುಟ್ಟಿದ
ಇವನು ಅವನ ಹಣೆಯ ನೆರಿಗೆ ಅರ್ಥವಾದರೂ ಸುಮ್ಮನಿದ್ದ.

ಆಯ್ಕೆ

ಅವನು ನವಿಲು
ಇವನು ಕೋಗಿಲೆ

ಅವನು ಹಾಡಿದ
ಇವನು ಕುಣಿದ

"ಹೆಳವನ ಹೆಗಲ ಮೇಲೆ" ಕೂತವಳಂತೆ ದಿಟ್ಟಿಸಿದೆ.

No comments: