ಎರಡು ಬೆಸ್ತರ ನೀಲುಗಳು
ನಡುನಡುವೆ
ಪಟ್ಣಣದತ್ತ ಕಣ್ಣಿಟ್ಟ ಬೆಸ್ತರ ಹುಡುಗ
“ಮೀನಲ್ಲಿ… ಭವಿಷ್ಯ… ಇಲ್ಲ… ಏನು ಮಾಡೋದು” ಅಂತ
ತಡೆತಡೆದು ಆಡಿದ ಮಾತುಗಳ ನಡುವೆಲ್ಲಾ
ಕಡಲ ಮೊರೆತ ತುಂಬಿಕೊಂಡಿತು
ಅನುಮಾನಕ್ಕೆಡೆ ಕೊಡದಂತೆ.
ಪ್ರಶ್ನೆಯಿಲ್ಲದ ಉತ್ತರ
“ಬೇರೆ ನೀರಿಗೆ ಹೋಗಿವೆ ಮೀನು;
ಖಾಲಿ ಬಲೆ ಎಳೆಯಲಿಕ್ಕೇಕೆ ಬೇಕು
ಪಟ್ಟಣಕ್ಕೆ ಹೋದ ಮಕ್ಕಳು” ಎನ್ನುತ್ತಲೇ
ಬೆಸ್ತರ ಮುದುಕ
ಹರಿದ ಬಲೆಯನ್ನು ಸೇರಿಸಿ
ಸೇರಿಸಿ ಹೊಲಿದೇ ಹೊಲಿದ.
No comments:
Post a Comment