5.7.07

ಪೋಲಿ ಭಜನೆ

ಸಂತ ಕವಿಯ
ಪೋಲಿ ಪದ್ಯದ ಸೊಲ್ಲುಗಳೆಲ್ಲಾ
ಭಜನೆಯಂತಿದೆ ಎಂಬ ಪೋಲಿಗಳ,
ಪೋಲಿಯಾಗಿದೆ ಎಂಬ ಭಕ್ತಾದಿಗಳ
ಚೀತ್ಕಾರ-
ಸಂತ ಕವಿಯ ಗಂಟು ಮುಖದಲ್ಲಿ
ನಗುವಿನ ಸಣ್ಣ ಗೆರೆ ಎಬ್ಬಿಸಿದ್ದು ನೋಡಿದಿರ?

2 comments:

Keshav.Kulkarni said...

ಇದನ್ನು ಓದಿ ಲಂಕೇಶ್ ತುಂಬ ನೆನಪಾದರು. ಅವರು ಇನ್ನೂ ಬದುಕಿದ್ದರೆ, ಬಹುಷಃ ಹೀಗೆ ಬರೆಯುತ್ತಿದ್ದರೆನಿಸುತ್ತದೆ. ಖುಷ್ ವಂತ್ ಸಿಂಗರ ಪೋಲಿತನ ಮತ್ತು ಅಡಿಗರ ಸೂಕ್ಷ್ಮತೆ ಒಟ್ಟಿಗೆ ಹಿಡಿದಂತೆ..

ಅನಿವಾಸಿ said...

ಪ್ರತಿಕ್ರಿಯೆಗೆ ಥ್ಯಾಂಕ್ಸ್ ಕೇಶವರೆ,
ನಿಮ್ಮ ಉತ್ತೇಜನ ಹುರುಪು ತುಂಬುತ್ತದೆ!